ಭಾರತದ ಚಿನ್ಹೆಗಳು
ರಾಷ್ಟ್ರಧ್ವಜ:
ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2. ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ. ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. ಹಾಗೆಯೇ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. ಆದರೆ ಧ್ವಜಸಂಹಿತೆ ಜಾರಿಗೆ ಬಂದದ್ದು ಮಾತ್ರ (flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.
ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.ನಮ್ಮ ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.
ರಾಷ್ಟ್ರೀಯ_ಚಿನ್ಹೆ:
ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ. ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ. ಭಾರತ ಸರ್ಕಾರವು ಇದನ್ನು 26 ಜನೆವರಿ 1950 ರಂದು ಅಳವಡಿಸಿಕೊಂಡಿತು. ಇದರ ಕೆಳಗೆ ಮಂಡಕೊಪನಿಷತ್ತಿನಿಂದ ಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು.ರಾಷ್ಟ್ರೀಯ_ಹೂವು:
ಭಾರತದ ಪುಷ್ಪ - ಕಮಲದ ಹೂವು. ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ. ಕಮಲದ ವೈಜ್ಞಾನಿಕ ಹೆಸರು - ನೀಲುಂಬಾ ನುಸಿಫೇರಾ(Nelumbo nucifera). ಸಸ್ಯ ಸಂಪತ್ತಿನಲ್ಲಿ ಭಾರತ ಜಗತ್ತಿನಲ್ಲಿ 10 ನೇ ಸ್ಥಾನದಲ್ಲಿದೆ.ರಾಷ್ಟ್ರಗೀತೆ:
ಭಾರತದ ರಾಷ್ಟ್ರಗೀತೆ 'ಜನಗಣಮನ". ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ. ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು. ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ. ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ ಹಾಡುವ ನಿಯಮವಿದೆ. ಹಾಗೆಯೇ ರವೀಂದ್ರನಾಥ ಟ್ಯಾಗೋರ್ ರವರ 'ಅಮರ್ ಸೋನಾರ್ ಬಾಂಗ್ಲಾ' ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ( ಈ ಗೀತೆಯನ್ನು 1905 ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ರಚಿಸಿದ್ದರು)
ನಂತರದಲ್ಲಿ 1905 ರ ಬಂಗಾಳ ವಿಭಜನೆ ವಿರೋಧಿಸಿ ಇವರು ಹಿಂದೂ ಮುಸ್ಲಿಂರಿಗೆ "ರಕ್ಷಾಬಂಧನ" ಆಚರಿಸುವಂತೆ ಕರೆ ನೀಡಿದ್ದರು.
ರಾಷ್ಟ್ರೀಯ_ಹಾಡು:
ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು ಭಾರತದ ಸಂವಿಧಾನ ರಚನಾ ಸಭೇಯನ್ನು ಜನೆವರಿ 24 1950 ರಂದು ಅಳವಡಿಸಿಕೊಂಡಿತು. ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ ಚಟ್ಟೋಪಧ್ಯಾಯರು 1882 ರಲ್ಲಿ ರಚಿಸಿದ 'ಆನಂದಮಠ' ಕಾದಂಬರಿಯಿಂದ ಆಯ್ದುಕ್ಕೊಳ್ಳಲಾಗಿದೆ. ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾ ಕಾಂಗ್ರೆಸ್ಸ ಅಧಿವೇಶನದಲ್ಲಿ ಹಾಡಲಾಯಿತು. ಭಾರತಕ್ಕೆ ಸ್ವಾತಂತ್ರ ದೊರೆಯವರೆಗೂ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡಲಾಗುತ್ತಿತ್ತು. ಮತ್ತುಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.
ರಾಷ್ಟ್ರೀಯ_ಪಂಚಾಂಗ:
ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ. ಇದನ್ನು ಮಾರ್ಚ 22, 1957 ರಂದು ಅವಡಿಸಿಕ್ಕೊಳಲಾಗಿದೆ. ಸಾಮಾನ್ಯ ವರ್ಷದ ಮೊದಲ ದಿನಾಂಕ - ಮಾರ್ಚ 21 ಮತ್ತು ಅಧಿಕ ವರ್ಷದ ಮೊದಲ ದಿನಾಂಕ - ಮಾರ್ಚ 22.ಕ್ರಿ.ಶ 78 ಶಾಲಿವಾನ ಶಕೆ ವರ್ಷವನ್ನು ಕುಶಾನರ ಅರಸ ಕನಿಷ್ಕನು ಅಧಿಕಾರಕ್ಕೆ ಬಂದಿರುವದರ ನೆನಪಿಗಾಗಿ ಜಾರಿಗೆ ತಂದನು.
2015 ರ ವರ್ಷವನ್ನು ಭಾರತೀಯ ಕ್ಯಾಲೆಂಡರನಂತೆ 1937 ನೇ ವರ್ಷ ಎನ್ನಲಾಗುವುದು. ಇನ್ನಷ್ಟು ವಿಶೇಷ ವೆಂದರೇ ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ ಮೊದಲನೇ ತಿಂಗಳು - ಚೈತ್ರ. ಕೊನೆಯ ತಿಂಗಳು - ಫಾಲ್ಗುಣ. ರಾಷ್ಟ್ರೀಯ ಪಂಚಾಂಗದ ತಿಂಗಳುಗಳು : ಚೈತ್ರ ವೈಶಾಖ ಜೇಷ್ಟ ಆಶಾಢ ಶ್ರಾವಣ ಭಾದ್ರಪದ ಅಶ್ವಿನ್ ಕಾರ್ತಿಕ ಮೃಗಶಿರ ಪುಷ್ಯ ಮಾಘ ಫಾಲ್ಗುಣ
ರಾಷ್ಟ್ರೀಯ_ಕ್ರೀಡೆ:
ಭಾರತದ ರಾಷ್ಟ್ರೀಯ ಕ್ರೀಡೆ - ಹಾಕಿಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ. ಭಾರತ ಹಾಕಿ ತಂಡ ಒಟ್ಟು 08 ಸಲ ಓಲಂಪಿಕ್ಸನಲ್ಲಿ ಚಿನ್ನದ ಪದಕ ಗೆದ್ದಿದೆ. ಕರ್ನಾಟಕದ ಕೊಡಗು ಜಿಲ್ಲೆಗೆ ಹಾಕಿಯ ತವರೂರು ಎನ್ನುತ್ತಾರೆ. ಮತ್ತು ಇಲ್ಲಿಯ ಮಾಂತ್ರಿಕ ಆಟಗಾರರೆಂದೇ ಹೆಸರಾದ ಹಾಕಿಯ ಮಾಂತ್ರಿಕ - ಧ್ಯಾನಚಂದ್. ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಅಗಷ್ಟ್ -29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುವರು.
ಕರ್ನಾಟಕದ ರಾಷ್ಟ್ರೀಯ ಕ್ರೀಡೆ ಸಹ ಹಾಕಿ ಆಗಿದೆ.
ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ ಹಾಕಿ ಕ್ರೀಡೆಯ ಟ್ರೋಫಿಯಾಗಿದೆ. ಹಾಗೂ ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ - 70 ನಿಮಿಷಗಳಾಗಿದೆ.
ರಾಷ್ಟ್ರೀಯ_ನದಿ:
ಭಾರತದ ರಾಷ್ಟ್ರೀಯ ನದಿ - ಗಂಗಾನದಿನವೆಂಬರ್ 04, 2008 ರಂದು ಗಂಗಾನದಿಯನ್ನು ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು ಘೋಷಿಸಿದರು.
ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ ಉದ್ದವಾಗಿದೆ(2510 km) ಮತ್ತು
ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ ಪಾಟ್ನಾದಲ್ಲಿ.
ರಾಷ್ಟ್ರೀಯ_ಜಲಪ್ರಾಣಿ:
ಭಾರತ ಸರ್ಕಾರವು ಅಕ್ಟೋಬರ್ 05,2009 ರಂದು ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಪ್ರಾಣಿ ಎಂದು ಘೋಷಿಸಿದೆ ಮತ್ತು ಡಾಲ್ಫಿನದ ವೈಜ್ಞಾನಿಕ ಹೆಸರು - ಪ್ಲಾಂಟಾನಿಷ್ಟಾ ಗ್ಯಾಂಗ್ಯಾಟಿಕಾ.((Platanista gangetica)
ರಾಷ್ಟ್ರೀಯ_ಪಕ್ಷಿ:
ಭಾರತದ ರಾಷ್ಟ್ರೀಯ ಪಕ್ಷಿ - ನವಿಲು. ಭಾರತದ ವನ್ಯಜೀವಿ ರಕ್ಷಣಾ ಕಾಯ್ದೆ - 1972 ರ ಅಡಿಯಲ್ಲಿ ನವಿಲಗಳನ್ನು ಸಂರಕ್ಷಿಸಲಾಗುತ್ತಿದೆ. ನವಿಲಿನ ವೈಜ್ಞಾನಿಕ ಹೆಸರು - ಪಾವೋ ಕ್ರಿಸ್ಟಾಟಸ್ (pavo cristatus). ಹಾಗೇಯೇ ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ ನವಿಲು ವನ್ಯಧಾಮಗಳಿವೆ.
ರಾಷ್ಟ್ರೀಯ_ಮರ:
ಭಾರತದ ರಾಷ್ಟ್ರೀಯ ಮರ - ಬನಯಾನ್ ಅಥವಾ ಅರಳಿ ಮರ. ಅರಳಿ ಮರದ ವೈಜ್ಞಾನಿಕ ಹೆಸರು - ಫೈಕಾಸ್ ಬೆಂಗಾಲೆನಿಸ್ (ficus benghalensis)
ಮತ್ತು ಅರಳಿ ಮರದ ಬೇರುಗಳು ತಂತುರೂಪಗಳಾಗಿವೆ. ಹಾಗೆಯೇ ವಿಶೇಷವೆಂದರೇ ಗೌತನ ಬುದ್ದನಿಗೆ ಜ್ಞಾನೋದಯವಾದದ್ದು ಬಿಹಾರದ ಗಯಾದ ನಿರಂಜನ ನದಿಯ ದಡದಲ್ಲಿರುವ ಅರಳಿ ಮರದ ಕೆಳಗೆ. ಗೌತಮ ಬುದ್ದನ ಆಧ್ಯಾತ್ಮಿಕ ಗುರು - ಅಲಾರ ಕಮಾ. ಭಾರತದ ಅತ್ಯಂತ ದೊಡ್ಡ ಅರಳಿ ಇರುವುದು - ಕಲ್ಕತ್ತದಲ್ಲಿ. ಪ್ರಪಂಚದ ಅತಿ ದೊಡ್ಡ ವೃಕ್ಷ - ದೈತ್ಯ ಸಿಕೋಯ್ ಮರ.ಹಾಗೆಯೇ ಮರಗಳ ಆಯುಷ್ಯವನ್ನು ನಿರ್ಧರಿಸುವುದು ಅವುಗಳು ಕಾಂಡದಲ್ಲಿರುವ ಸೆಲ್ಯುಲಸನಿಂದ ಮಾಡಲ್ಪಟ್ಟಿರುವ ವೃತ್ತಗಳ ಸಂಖ್ಯೆಯ ಆಧಾರದ ಮೇಲೆ.
ರಾಷ್ಟ್ರೀಯ_ಹಣ್ಣು:
ಭಾರತದ ರಾಷ್ಟ್ರೀಯ ಹಣ್ಣು - ಮಾವಿನ ಹಣ್ಣು. ಮಾವಿನ ವೈಜ್ಞಾನಿಕ ಹೆಸರು - ಮ್ಯಾಂಜಿಫೇರಾ ಇಂಡಿಕಾ (mangifera indica)
ಮಾವಿನ ಹಣ್ಣಿನಲ್ಲಿರುವ ಜೀವಸತ್ವಗಳು - A,C,Dಹಾಗೆಯೇ ಭಾರತವು ಮಾವಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ.
ರಾಷ್ಟ್ರೀಯ_ವಂಶಪಾರಂಪರ್ಯ_ಪ್ರಾಣಿ:
ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ. ಆನೆಯ ವೈಜ್ಞಾನಿಕ ಹೆಸರು - ಎಲಿಫಾಸ್ ಮ್ಯಾಕ್ಷಿಮಸ್ (elephas maximus)
ಮತ್ತು ಭೂವಾಸಿಗಳಲ್ಲಿ ದೊಡ್ಡದಾದ ಪ್ರಾಣಿ - ಆಪ್ರಿಕಾದ ಆನೆ. ಭಾರತದ ಆನೆಗಳ ಯೋಜನೆ ಜಾರಿಗೆ ತಂದ ವರ್ಷ - 1992. ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ.ಕರ್ನಾಟಕದ ರಾಜ್ಯ ಪ್ರಾಣಿ - ಆನೆ.
ರಾಷ್ಟ್ರೀಯ_ಪ್ರಾಣಿ:
1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು. ಭಾರತದ ಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು. ಮತ್ತೂ
ಹುಲಿಯ ವೈಜ್ಞಾನಿಕ ಹೆಸರು - ಪ್ಯಾಂಥೇರಾ ಟ್ರೈಗಿಸ್. (Panthera tigris). ಭಾರತದ ಮೊದಲ ಹುಲಿ ಅಭಯಾರಣ್ಯ - ಉತ್ತರಖಂಡದ ಕಾರ್ಬೆಟ್ಹಾಗೆಯೇ ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ. ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ - ಆಂದ್ರಪ್ರದೇಶದ ನಾಗಾರ್ಜುನ ಸಾಗರ. ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ - ಪಶ್ಚಿಮ ಬಂಗಾಳದ ಸುಂದರಬನ್ಸ್
ಮತ್ತು ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ - 1972
ರಾಷ್ಟ್ರೀಯ_ಕಟ್ಟಡ:
ದೆಹಲಿಯಲ್ಲಿರುವ ಇಂಡಿಯಾ ಗೇಟ್ ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ.
ರಾಷ್ಟ್ರೀಯ_ದೊರೆ:
ಮೌರ್ಯ ವಂಶದ ಚಂದ್ರಗುಪ್ತ ಮೌರ್ಯ.
∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆
ಸಂಗ್ರಹ: ANAND SHIKKERI (Asst master).
∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆














ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ