ಶುಕ್ರವಾರ, ಮಾರ್ಚ್ 2, 2018

ಶಿವಾಜಿ



Q)ಶಿವಾಜಿಯ ಕೋಟೆಯ ಅಧಿಕಾರಿ......
a) ಸಬ್ನೀಸ್
b) ಹವಾಲ್ದಾರ್
c) ದುರ್ಗಪಾಲಿ
d) ಸರ್ನೋಬತ್

D✅✅

ಶಿನಾಯಕತ್ವ ವಹಿಸಿತುತ್ತಿದ್ದನು ಹವಾಲ್ದಾರ 50 ಜುಮ್ಲಾದಾರ 100 ಹಜಾರಿ 1000 ಸೈನಿಕರಿಗೆ ನಾಯಕರಾಗಿದ್ದರು ಸರ್ನೋಬತ್ ಕೈ ಕೆಳಗೆ 7000 ಸೈನಿಕರಿದ್ದರು.

Q). ಮರಾಠರ ಗ್ರಾಮಾಡಳಿತದ ಮುಖ್ಯಸ್ಥ...............
a) ದೇಶಪಾಂಡೆ
b) ಪಟೇಲ
c) ಕನಕಲ್
d) ದೇಶಮುಖ್

B✅✅ಪಟೇಲ

ಶಿವಾಜಿ ಆಡಳಿತ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ ವಿಂಗಡಿಸಿದನು.ಗ್ರಾಮ ಆಡಳಿತದ ಕಡೆಯ ಆಡಳಿತ ಘಟಕವಾಗಿದ್ದು. ಗ್ರಾಮಾಡಳಿತ ಪಟೇಲನಿಗೆ ಸೇರಿತ್ತು.ಗ್ರಾಮ ಮುಖಂಡನಾದ ಪಟೇಲ ನೆರವಿಗೆ ಗ್ರಾಮ ಪಂಚಾಯಿತಿಗಳಿದ್ದವು.

Q). ಶಿವಾಜಿ ಯಾವಾಗ ಜನಿಸಿದನು?
a) ಕ್ರಿ.ಶ.1625
b) ಕ್ರಿ.ಶ.1627
c) ಕ್ರಿ.ಶ.1647
d) ಕ್ರಿ.ಶ.1628

ಶಿವಾಜಿಯು ಏಫ್ರೀಲ್ 20, 1627 ಪೂನಾ ಬಳಿಯ ಶಿವನೇರುದುಗ೯ದಲ್ಲಿ ಜನಿಸಿದನು. ಶಿವಾಜಿಯ ತಂದೆ ಷಹಜೀ ಬೋಂಸ್ಲೆ, ತಾಯಿ ಜೀಜಾಬಾಯಿ. ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.

Q). ಶಿವಾಜಿಯ ನೌಕ ನೆಲೆ ಎಲ್ಲಿತ್ತು ?
a) ಕೊಲಾಬಾ
b) ಕಲ್ಯಾಣ
c) ಬೆಸ್ಸಿನ್
d) ಸಾಲ್ಸಿಟಿ
A✅✅✅

ಚೋಳರು ಬಿಟ್ಟರೆ ಭಾರತದಲ್ಲಿ ನೌಕ ಪಡೆಗೆ ಹೆಚ್ಚಿನ ಗಮನ ನೀಡಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅವನು ದೌಲತಖಾನ್ ನೇತೃತ್ವದಲ್ಲಿ ಒಂದು ನೌಕಪಡೆ ನಿರ್ಮಿಸಿದನು ಕೋಲಾಬ ಅದರ ಕೇಂದ್ರವಾಗಿತ್ತು.

Q). ಬಾಲಾಜಿ ವಿಶ್ವನಾಥನು ಪೇಶ್ವೆಯಾದದು _____ರಲ್ಲಿ
a) 1712
b) 1713
c) 1715
d) 1718
B✅✅

ಬಾಲಾಜಿ ವಿಶ್ವನಾಥನು ಮರಾಠರ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ ಇವನ ಆರಂಭ ಹೆಸರು ಬಾಲಾಜಿ ಭಟ್ಟ ಬಾಲಾಜಿ 1660 ರಲ್ಲಿ ಜಿಂಜಿರಾಧ ಶ್ರೀ ವರ್ಧನ ಎಂಬಲ್ಲಿ ಜನಿಸಿದನು.

Q). ಶಿವಾಜಿಯ ಆಧ್ಯಾತ್ಮಕ ಗುರು ಯಾರು?
a) ರಾಮದಾಸ
b) ರೈದಾಸ
c) ದಾದಾಜಿಕೊಂಡದೇವ
d) ಶಂಕರದೇವ

A✅✅✅

ಶಿವಾಜಿಯ ಬಾಲ್ಯದಲ್ಲಿ ತಂದೆಯ ಪ್ರೀತಿಯನ್ನು ಪಡೆಯುವಲ್ಲಿ ವಂಚಿತನಾದನು.ತಾಯಿ- ಜೀಜಾಬಾಯಿ,ದಾದಾಜಿಕೊಂಡದೇವ ಮತ್ತು ಗುರು ರಾಮದಾಸರು ಅವನನ್ನು ಮಹಾಯೋಧನನ್ನಾಗಿ ಸ್ವಧರ್ಮ ಮತ್ತು ಸ್ವರಾಜ್ಯ ನಿರ್ಮಾಣ ಕಾರನ್ನಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

Q). ಶಿವಾಜಿ ಯಾವಗ ಸೂರತನ್ನು 2 ಬಾರಿ ಲೂಟಿ ಮಾಡಿದನು.
a) 1664 ಮತ್ತು 1670
b) 1665 ಮತ್ತು 1871
c) 1666 ಮತ್ತು 1672
d) 1667 ಮತ್ತು 1675

A✅✅1664 ಮತ್ತು 1670

1664-1670 ರ ಜನವರಿ 20 ರಂದು ಶಿವಾಜಿ ಮೊಗಲರ ಶ್ರೀಮಂತ ರೇವುಪಟ್ಟಣವಾದ ಸೂರತನ್ನು ಮುತ್ತಿ ಲೂಟಿ ಮಾಡಿದನು ಸುಮಾರು 1 ಕೋಟಿ.ರೂ ಸಂಪತ್ತು ಅವನ ವಂಶವಾಯಿತು. 1670- 2 ನೇ ಬಾರಿಗೆ ಸೂರತನ್ನು ಮುತ್ತಿ 66 ಲಕ್ಷ ರೂ ಸಂಪತ್ತನ್ನು ದೋಚಿದನು.

Q). ಶಿವಾಜಿಯ ಅಷ್ಠ ಪ್ರಧಾನರಲ್ಲಿ ಯಾರು ಶ್ರೇಷ್ಠರು?
a) ಸಚಿವ
b) ಅಮಾತ್ಯ
c) ಸುಮುಂತ
d) ಪೇಶ್ವ

B✅✅✅

ಶಿವಾಜಿ ಅಷ್ಠ ಪ್ರಧಾನರಲ್ಲಿ ಅಮಾತ್ಯ (ಮಜುಂದಾರ್) ಅರ್ಥ ಸಚಿವ, ಕಂದಾಯ ಮಂತ್ರಿ ಸಾರ್ವಜನಿಕ ಅದಾಯ ಖರ್ಚು-ವೆಚ್ಚ ವೀಕ್ಷಿಸುವುದು ಸಾರ್ವಜನಿಕ ಲೆಕ್ಕ ಪತ್ರಗಳನ್ನು ಪರಿಶೀಲಿಸುವುದು ಇವನ ಕರ್ತವ್ಯಗಳಾಗಿದ್ದು ಮಜುಂದಾರ ಅವನ ಮತ್ತೊಂದು ಹೆಸರು ರಾಮಚಂದ್ರ ನೀಲಕಂಠ.

Q). ಕೃಷ್ಣಾದಿಂದ ಅಟ್ಟೋಕವರಗೆ ಮರಾಠ ಧ್ವಜ ಹಾರಾಡುವಂತೆ ಮಾಡೋಣ ಹೀಗೆಂದು ಹೇಳಿದವರು...
a) 1 ನೇ ಬಾಜಿರಾಯ
b) ಬಾಲಾಜಿರಾವ
c) ಬಾಲಾಜಿ ವಿಶ್ವನಾಥ
d) ಶಿವಾಜಿ

A✅✅✅1 ನೇ ಬಾಜಿರಾಯ

ಒಂದನೇ ಬಾಜಿರಾಯ (ಕ್ರಿ.ಶ.1720-1740) ಬಾಲಾಜಿ ವಿಶ್ವನಾಥನ ಮರಣದ ನಂತರ ಅವನ ಹಿರಿಯ ಮಗ ಒಂದನೇ ಬಾಜೀರಾಯನನ್ನು ತನ್ನ ಪೇಶ್ವೆಯಾಗಿ ನೇಮಿಸಿಕೊಂಡನು. ಮೊಗಲ ಚಕ್ರವರ್ತಿಗಳ ದೌರ್ಬಲ್ಯದ ಪೂರ್ಣ ಲಾಭ ಪಡೆಯಲು ಮುಂದಾದನು. ಅವನು ಮರಾಠ ಮುಖಂಡರಿಗೆ ಹೀಗೆ ಹೇಳಿದನು."ಇದೀಗ ಹಿಂದೂಸ್ಥಾನದಿಂದ ಪರಕೀಯರನ್ನು ಹೊರ ಹಾಕುವ ಕಾಲ ಸನ್ನದ್ದವಾಗಿದೆ. ಮೊಗಲ ಸಾಮ್ರಾಜ್ಯವು ಒಂದು ಬಾಡುತ್ತಿರುವ ಮರ ಅದರ ಕಾಂಡವನ್ನು ನಾವು ಹೊಡೆಯೋಣ ಅದರ ಕೊಂಬೆಗಳು ತಾವಾಗಿಯೇ ಉರುಳಿ ಬೀಳುತ್ತವೆ." ಹಾಗದಲ್ಲಿ ಮರಾಠ ಧ್ವಜವನ್ನು ಕೃಷ್ಣಾ ನದಿಯಿಂದ ಅಟ್ಟೋಕವರೆಗೆ (ಸಿಂಧೂ ನದಿ) ಹಾರಾಡುವಂತೆ ಮಾಡೋಣ " ಸಾಹು ಪೇಶ್ವೆಯ ನೀತಿಯನ್ನು ಬೆಂಬಲಿಸಿ "ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದಗೆ ತಕ್ಕ ಮಗ". ಹೇಳಿದನು.

Q). ಶಿವಾಜಿ ಯಾವ ಮೊಗಲ್ ದಂಡನಾಯಕನೊಡನೆ ಪುರಂದರ ಒಪ್ಪಂದ ಮಾಡಿಕೊಂಡನು?
a) ದಿಲವಾರಖಾನ್
b) ಜೈಸಿಂಗ್
c) ಬಹದ್ದೂರ್ ಖಾನ್
d) ಜಸ್ವಂತ್ ಸಿಂಗ್

B✅✅✅ಜೈಸಿಂಗ್

ಪುರಂದರ ಗಡ ಒಪ್ಪಂದ (ಜೂನ 22, 1665) ಮೊಗಲರ ದಾಳಿಗಳಿಂದ ಮರಾಠರಿಗೆ ತುಂಬಾ ಹಾನಿಯಾಯಿತು. ಮಾವಳಿ ಮುಖಂಡ ಮುನಾರಬಾಜಿ ದೇಶಪಾಂಡೆ 300 ಮಾವಳಿಗಳೊಂದಿಗೆ ಹೋರಾಡಿ ಹತನಾದನು. ವಿಧಿ ಇಲ್ಲದೆ ಶಿವಾಜಿ ರಾಯಗಡವನ್ನು ಉಳಿಸಿಕೊಳ್ಳಲು ಜೈಸಿಂಗನೊಡನೆ ಪುರಂದರಗಢ ಒಪ್ಪಂದ ಮಾಡಿಕೊಂಡನು.

Q). ಶಿವಾಜಿಗೆ ಕಿರೀಟ ಧಾರಣೆಯಾದ ವರ್ಷ........
a) ಕ್ರಿ.ಶ.1774
b) ಕ್ರಿ.ಶ.1778
c) ಕ್ರಿ.ಶ.1672
d) ಕ್ರಿ.ಶ.1674

ಶಿವಾಜಿಯ ಕಿರೀಟಧಾರಣೆ ಜೂನ್ 16, 1674 ರಂದು ರಾಯಗಡದಲ್ಲಿ ಶಿವಾಜಿ ಪಟ್ಟಾಭಿಷಿಕ್ತನಾಗಿ ’ ಛತ್ರಪತಿ’ ಎಂಬ ಬಿರುದು ಗಳಿಸಿದನು ಛತ್ರಪತಿ ಎಂದರೆ ರಾಜರ ರಾಜ ಎಂದರ್ಥ.

D✅✅✅


Q). ಶಿವಾಜಿ ಮರಣ ಹೊಂದಿದ ವರ್ಷ..........
a) ಕ್ರಿ.ಶ.1680
b) ಕ್ರಿ.ಶ.1984
c) ಕ್ರಿ.ಶ.1686
d) ಕ್ರಿ.ಶ.1690

A✅✅✅ಕ್ರಿ.ಶ.1680

ಶಿವಾಜಿ ಬೆಂಗಳೂರನ್ನು ಆಕ್ರಮಿಸಿ ಅದನ್ನು ಏಕೋಜಿಗೆ ಒಪ್ಪಿಸಿದನು. ಶ್ರೀರಂಗಪಟ್ಟಣವನ್ನು ಮುತ್ತಿ ಅದನ್ನು ಕೊಳ್ಳೆ ಹೊಡೆದನು. 1678 ರಲ್ಲಿ ತುಂಗಭದ್ರ ನದಿಯ ಉತ್ತರ ಭಾಗ ಅವನ ಕೈ ಸೇರಿತು. ಏಫ್ರಿಲ್ 14, 1680 ರಂದು ಶಿವಾಜಿ ತನ್ನ 53 ವಯಸ್ಸಿನಲ್ಲಿ ತೀರಿಕೊಂಡನು.
Q). ಶಿವಾಜಿ ತನ್ನ ರಾಜ್ಯವನನು .......... ಭಾಗಗಳಾಗಿ ವಿಭಾಗಿಸಿದ್ದನು?
a) 2
b) 3
c) 4
d) 5

C✅✅✅ಸರ್ನೋಬತ್ಡ

ಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ (ಪೂನಾ,ಕೊಂಕಣ,ಉತ್ತರ ಕಾರವಾರ, ಸೂರತ್) ನಲ್ಲಿ ವಿಂಗಡಿಸಿದ್ದನು. ಪ್ರತಿ ಪ್ರಾಂತ್ಯಕ್ಕೆ ಒಬ್ಬೊಬ್ಬ ರಾಜ್ಯಪಾಲರನನ್ನು (ಸುಬೇದಾರ) ನೇಮಿಸಿದನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

JNAANASAMPAD

ನಳಂದ ವಿಶ್ವವಿದ್ಯಾಲಯ

ಭಾರತದ ಪುರಾತನ ಕಾಲದ ಜ್ಞಾನದ ಖನಜ  "ನಾಲಂದಾ ವಿಶ್ವವಿದ್ಯಾಲಯ"  ━━━━━━━━━━━━━━━━━━━━━━ —ತಕ್ಷಶಿಲಾ ತರುವಾಯ ಪ್ರಖ್ಯಾತಿಗೆ ಬಂದ ನಾಲಂದಾ ವಿಶ್ವ...

Current post