ಮಂಗಳವಾರ, ಜುಲೈ 2, 2019

★ ಹುಲಿ ಯೋಜನೆ (Project Tiger):


ಈ ಯೋಜನೆಯನ್ನು 1973ರಿಂದ ಅನುಷ್ಠಾನಗೊಳಿಸಲಾಗಿದೆ ಮತ್ತು ಭಾರತ ಸರ್ಕಾರವು ಶೇಕಡಾ 50%ರಷ್ಟು ಆವರ್ತನೀಯ ಬಾಬ್ತನ್ನು ಹಾಗೂ ಶೇಕಡಾ 100%ರಷ್ಟು ಆವರ್ತನೀಯವಲ್ಲದ ಬಾಬ್ತನ್ನು ಒದಗಿಸುತ್ತದೆ.

 ಬಂಡೀಪುರ ಹುಲಿ ಮೀಸಲು, ರಾಜೀವ್ ಗಾಂಧಿ (ನಾಗರಹೊಳೆ) ಹುಲಿ ಮೀಸಲು, ಭದ್ರಾ ಹುಲಿ ಮೀಸಲು ಮತ್ತು ಅನ್ಶಿ-ದಾಂಡೇಲಿ ಹುಲಿ ಮೀಸಲು, ಹುಲಿ ಯೋಜನೆ ಅಡಿಯಲ್ಲಿ ಬರುತ್ತವೆ.

— ಈ ಯೋಜನೆಯ ಅಡಿಯಲ್ಲಿ ಕೈಗೊಳ್ಳುವ ಕೆಲಸಗಳೆಂದರೆ; ಹುಲಿ ಸಂರಕ್ಷಣಾ ಪಡೆ, ಮಳೆಗಾಲದ ಗಸ್ತು ದಳಗಳನ್ನು ಸ್ಥಾಪಿಸುವುದು, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ, ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸಂಘಟಿಸುವುದರ ಮೂಲಕ ಕಳ್ಳಬೇಟೆಯನ್ನು ತಡೆಯುವುದು, ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ವೈರ್ಲೆಸ್ ಸೆಟ್ಗಳ, ವಾಹನಗಳ ನಿರ್ವಹಣೆ, ಬೆಂಕಿ ನಿಯಂತ್ರಣದ ಕೆಲಸ, ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲು ನೀರಿನ ಹೊಂಡಗಳನ್ನು ನಿರ್ಮಿಸುವುದು, ಪ್ರಚಾರ ಕಾರ್ಯಗಳು, ಆವಾಸಸ್ಥಾನ ಅಭಿವೃದ್ಧಿ ಕೆಲಸಗಳು ಹಾಗೂ ಜೈವಿಕ ಪರಿಸರ ಅಭಿವೃದ್ಧಿ ಕೆಲಸಗಳು ಇತ್ಯಾದಿ.

— ರಾಜ್ಯದ 5 ಹುಲಿ ಮೀಸಲುಗಳಲ್ಲಿ ರಾಷ್ಟ್ರದ ಅತಿ ಹೆಚ್ಚು ಹುಲಿಗಳಿವೆ ಹಾಗೂ ಹುಲಿ ಸಂತತಿಯಲ್ಲಿ ರಾಜ್ಯವು ಮೊದಲನೇ ಸ್ಥಾನದಲ್ಲಿದೆ. 2010ರ ಹುಲಿ ಗಣನೆಯಂತೆ ರಾಜ್ಯದಲ್ಲಿ 300 ಹುಲಿಗಳಿವೆ. 2013ರ ಹುಲಿ ಗಣನೆಯಂತೆ ರಾಜ್ಯದಲ್ಲಿ 406 ಹುಲಿಗಳಿವೆ.
.....................................................................................
ಕೃಪೆ: ಗೂಗಲ್ ಮಾಹಿತಿ
ಸಂಗ್ರಹ: ANAND SHIKKERI (MPKBSDHP)
.....................................................................................

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

JNAANASAMPAD

ನಳಂದ ವಿಶ್ವವಿದ್ಯಾಲಯ

ಭಾರತದ ಪುರಾತನ ಕಾಲದ ಜ್ಞಾನದ ಖನಜ  "ನಾಲಂದಾ ವಿಶ್ವವಿದ್ಯಾಲಯ"  ━━━━━━━━━━━━━━━━━━━━━━ —ತಕ್ಷಶಿಲಾ ತರುವಾಯ ಪ್ರಖ್ಯಾತಿಗೆ ಬಂದ ನಾಲಂದಾ ವಿಶ್ವ...

Current post