ಸೋಮವಾರ, ಮಾರ್ಚ್ 5, 2018

ಭಾರತೀಯ ಸಾಮ್ರಾಜ್ಯಗಳು


ಭಾರತೀಯ ಸಾಮ್ರಾಜ್ಯಗಳು:

೧) ಮೌರ್ಯರು :

━━━━━━━━━

ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ.  ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.
* ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.

* ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು  :
ಸುವರ್ಣಗಿರಿ,  ಇಸಿಲ,  ತೊಸಿಲ,  ಸಂಪ.

* ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :
- ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ,  ಅ.ಸಿದ್ದಾಪುರ,  ಜಿ.ರಾಮೇಶ್ವರ.
- ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ,  ಪಾಲ್ಕಿಗುಂಡು,  ಕೊಪ್ಪಳ.
- ಗುಲ್ಬರ್ಗಾ ಜಿಲ್ಲೆಯ ಸನ್ನತಿ.
- ಬಳ್ಳಾರಿ ಜಿಲ್ಲೆಯ ನಿಟ್ಟೂರು,  ಉದೇಗೊಳ್ಳಂ 

೨)  ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) : 

━━━━━━━━━━━━━━━━━━━━━━━━━━━━━━━━━-
ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ,  (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.  
* ಇವರ ರಾಜಧಾನಿ  :  ಪೈತಾನ್ ಅಥವಾ ಪ್ರತಿಷ್ಠಾನ.
* ಇವರ ಲಾಂಛನ :  ವರುಣ.
* ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.
* ಶಾತವಾಹನರ ಮೂಲ ಪುರುಷ  :  ಸಿಮುಖ. 
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ 
* ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.

೩)  ಬನವಾಸಿಯ ಕದಂಬರು (ಕ್ರಿ.ಶ 345 - 540)

━━━━━━━━━━━━━━━━━━━━━━━━━━━━━━━━━━━━━━━━━
* ಈ ಸಂತತಿಯ ಸ್ಥಾಪಕ  :ಮಯೂರವರ್ಮ (ಮಯೂರಶರ್ಮ)  (345-360)
* ಕದಂಬರ ರಾಜಧಾನಿ :  ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ) 
* ಬನವಾಸಿಗೆ ವನವಾಸಿ,  ವೈಜಯಂತಿ,  ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.
* ಇವರ ಲಾಂಛನ :  ಸಿಂಹ.

೪)  ತಲಕಾಡಿನ ಗಂಗರು  (ಕ್ರಿ.ಶ 350- 999)

━━━━━━━━━━━━━━━━━━━━━━━━━━━━━━━━━━━━━━━━━
* ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು. 
* ಈ ಸಂತತಿಯ ಮೊದಲ ದೊರೆ : ದಡಿಗ (350 -400)
* ಇವರ ಮೊದಲ ರಾಜಧಾನಿ :  ಕೋಲಾರ ಬಳಿಯ ಕುವಲಾಲ
* ಇವರ ಎರಡನೆಯ ರಾಜಧಾನಿ : ತಲಕಾಡು
* ತಲಕಾಡಿನ ಮತ್ತೊಂದು ಹೆಸರು  :  ತಲವನಪುರ.
* ಇವರ ಮೂರನೇ ರಾಜಧಾನಿ :  ಚೆನ್ನಪಟ್ಟಣ ಬಳಿಯ ಮಾಕುಂದ
* ಇವರ ಲಾಂಛನ : ಆನೆ(ಮದಗಜ) 
* ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ : ದುರ್ವಿನೀತ (540-600)
* ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.
* ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು. 

೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757) : 

━━━━━━━━━━━━━━━━━━━━━━━━━━━━━━━━━━━━━━━━━
* ಈ ಸಂತತಿಯ ಸ್ಥಾಪಕ  :  ಜಯಸಿಂಹ 
* ಇವರ ರಾಜಧಾನಿ  : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ) 
* ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ :  ಇಮ್ಮಡಿ ಪುಲಕೇಶಿ (609-642) 
* ಇವರ ರಾಜ ಲಾಂಛನ  : ವರಹ.
* ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ :  ಚೀನಾದ ಬೌದ್ಧ ಯಾತ್ರಿಕ  ಹ್ಯೂಯನ್ ತ್ಸಾಂಗ್. 

೬) ಮಾನ್ಯಖೇಟದ ರಾಷ್ಟ್ರಕೂಟರು  (ಕ್ರಿ.ಶ 345 - 540) : 

━━━━━━━━━━━━━━━━━━━━━━━━━━━━━━━━━━━━━━━━━
* ಈ ಸಂತತಿಯ ಸ್ಥಾಪಕ : ದಂತಿದುರ್ಗ
* ಇವರ ರಾಜಧಾನಿ :  ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.
* ಇವರ ಲಾಂಛನ : ಗರುಡ
* ಈ ಸಂತತಿಯ ಅತ್ಯಂತ ಹೆಸರಾಂತ   ದೊರೆ :ಅಮೋಘವರ್ಷ ನೃಪತುಂಗ (814-878)
* ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು. 

೭) ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200)

━━━━━━━━━━━━━━━━━━━━━━━━━━━━━━━━━━━━━━━━━
* ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ
* ಇವರ ರಾಜಧಾನಿ : ಕಲ್ಯಾಣ
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)
* 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು. 

೮) ಕಲ್ಯಾಣಿಯ ಕಲಚೂರಿಗಳು  (ಕ್ರಿ.ಶ 1156 - 1183)

━━━━━━━━━━━━━━━━━━━━━━━━━━━━━━━━━━━━━━━━━
* ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ  ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು. 
* ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. 

೯) ದ್ವಾರಸಮುದ್ರದ ಹೊಯ್ಸಳರು  (ಕ್ರಿ.ಶ 985 - 1346) : 

━━━━━━━━━━━━━━━━━━━━━━━━━━━━━━━━━━━━━━━━━
* ಈ ಸಂತತಿಯ ಮೂಲ ಪುರುಷ  : ಸಳ.
* ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152) 
* ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.

*******************************************ಸಂಗ್ರಹ: ANAND SHIKKERI (Asst Master
*******************************************

ಶನಿವಾರ, ಮಾರ್ಚ್ 3, 2018

ವಿಶ್ವ ವನ್ಯಜೀವಿ ದಿನ

ವಿಶ್ವ ವನ್ಯಜೀವಿ ದಿನ.











    

 ಏಕೆ? ಈ ದಿನವನ್ನು ಆಚರಿಸಲಾಗುತ್ತದೆ:                        ಕಾಡುಪ್ರಾಣಿಗಳ ಬೇಟೆ ಜತೆಗೆ ಅವುಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟ ಅಕ್ರಮವಾಗಿ ನಡೆಯುತ್ತಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿನಲ್ಲಿವೆ. ಅರಣ್ಯ ಪ್ರದೇಶದ ಒತ್ತುವರಿ, ಮರಗಳ ಮಾರಣಹೋಮದಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇದರಿಂದ ಭವಿಷ್ಯದಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರಲಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ವಿಶ್ವ ವನ್ಯಜೀವಿ ದಿನವನ್ನು ಪ್ರತಿವರ್ಷ ಮಾರ್ಚ್‌ 3ರಂದು ಆಚರಿಸಲಾಗುತ್ತದೆ.


2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್‌ 3 ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು. ಜಗತ್ತಿನ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯಜೀವಿ ದಿನಾಚರಣೆಯ ಧ್ಯೇಯವಾಗಿದೆ ಸಿಐಟಿಇಎಸ್‌ ಒಪ್ಪಂದಕ್ಕೆ 1973 ಮಾರ್ಚ್‌ 3ರಂದು ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್‌ ರಂದು ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಸಿಐಟಿಇಎಸ್‌ ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ವಿಶ್ವದಾದ್ಯಂತ ಸಸ್ಯ ಹಾಗೂ ವನ್ಯ ಜೀವಿ ಸಂಕುಲಗಳ ಮೇಲೆ ಹಾನಿ ಆಗದಂತೆ ನಿಗಾವಹಿಸುತ್ತದೆ.

ಪ್ರತಿವರ್ಷ ಒಂದು ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ 'ಬಿಗ್‌ ಕ್ಯಾಟ್ಸ್‌' . ಸಿಂಹ, ಹುಲಿ, ಲೆಪಾರ್ಡ್‌, ಜಾಗ್ವರ್‌, ಚಿರತೆ, ಸ್ನೋ ಲೆಪಾರ್ಡ್‌, ಪೂಮಾ, ಕ್ಲೌಡೆಡ್‌ ಲೆಪಾರ್ಡ್‌ ಹಾಗೂ ಇಂಥ   Ü ಜಾತಿಗೆ ಸೇರಿದ ಕಾಡು ಪ್ರಾಣಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಎಲ್ಲ ದೇಶಗಳು ಭಾಗಿಯಾಗಿದ್ದು ಅದರಲ್ಲೂ ಭಾರತ ವಿಶಿಷ್ಟವಾದ ದೇಶ. ವಿವಿಧ ಸಂಸ್ಕೃತಿ ಹಾಗೂ ಪರಂಪರೆಯನ್ನು ಇಲ್ಲಿ ಕಾಣಬಹುದು. ಈ ನೆಲದಲ್ಲಿ ಭಾಷೆ, ಉಡುಗೆ, ಆಹಾರ, ಆಚರಣೆಗಳು ಒಂದಕ್ಕಿಂತ ಒಂದು ಜಾಗಕ್ಕೆ ಎಷ್ಟೊಂದು ವ್ಯತ್ಯಾಸ! ಇದಕ್ಕೆ ಕಾರಣವೆಂದರೆ ನಮ್ಮ ದೇಶದಲ್ಲಿರುವ ವಿವಿಧ ಭೂಗೋಳಿಕ ಪ್ರದೇಶಗಳು.
ಆ ಪ್ರದೇಶಕ್ಕೆ ಅನುಗುಣವಾಗುವಂತೆ ಅವರ ಉಡುಗೆ, ಆಹಾರ ಮತ್ತು ಜೀವನ ಶೈಲಿ ಇರುತ್ತದೆ. ಇದೇ ರೀತಿ ಆಯಾ ಭೌಗೋಳಿಕ ಪ್ರದೇಶಗಳಿಗೆ ಹೊಂದುವಂತೆ ಪ್ರಾಣಿಗಳು ಕೂಡ ವಿಕಾಸಗೊಳಿಸಿಕೊಂಡಿರುತ್ತವೆ. ಇದು ಸಾವಿರಾರು ವರ್ಷಗಳ ಕ್ರಿಯೆ. ಎಷ್ಟೋ ಬಾರಿ ನಮಗೆ ಇಂತಹ ಪ್ರಾಣಿಗಳು ನಮ್ಮ ದೇಶದಲ್ಲಿವೆ ಎನ್ನುವುದೇ ಗೊತ್ತಿರುವುದಿಲ್ಲ.ಉದಾರಣೆಗೆ ಕಂದು ಬಣ್ಣದ ಕರಡಿಗಳು, ಹಿಮ ತೋಳಗಳು, ಕಾಡು ಕುದುರೆ, ಕೆಂಪು ಪಾಂಡ, ಸ್ನೋ ಲೆಪರ್ಡ್ಸ್.. ಅಮೆರಿಕ ಹಾಗೂ ಕೆನಡಾದಲ್ಲಿ ದೇಶಗಳು ಕಂದು ಬಣ್ಣದ ಕರಡಿಗಳಿಗೆ ಹೆಸರುವಾಸಿ. ಇದನ್ನು ಅವರು ಗ್ರಿಸ್ಲ್ಯ ಬೇಯರ್ಸ್ ಎಂದು ಕರೆಯುತ್ತಾರೆ. ಇಂತಹ ಕರಡಿಗಳು ನಮ್ಮ ದೇಶದಲ್ಲೂ ಇವೆ! ಪೋರ್ಚುಗಲ್, ಜರ್ಮನಿ ಹಾಗೂ ಸ್ಕಾಟ್ಲೆಂಡ್ ಕಾಡುಕುದುರೆಗಳಿಗೆ ಹೆಸರುವಾಸಿ. ಇಂತಹ ಕಾಡುಕುದುರೆಗಳನ್ನು ಅಸ್ಸಾಂ ರಾಜ್ಯದ ಸೈಕೋವಾ ನ್ಯಾಷನಲ್ ಪಾರ್ಕ್ ನಲ್ಲಿ ನಾವು ಕಾಣಬಹುದು. ಇಂತಹ ಹಲವಾರು ವಿಶೇಷ ಪ್ರಾಣಿಗಳು ನಮ್ಮ ದೇಶದಲ್ಲಿದ್ದು, ಅಳಿವಿನ ಅಂಚಿನಲ್ಲಿವೆ. ಅವುಗಳ ಸಂತತಿ ತೀವ್ರವಾಗಿ ಕಡಿಮೆ ಆಗಿವೆ.
           ಐಯುಸಿಎನ್ ಎಂಬ ವಿಶ್ವ ಸಂಸ್ಥೆಯು ಭಾಗವಾಗಿರುವ ಇಲಾಖೆಯಿಂದ ಮಾಹಿತಿ ಪಡೆದು, ವನ್ಯ ಜೀವಿಗಳ ಸಂತತಿ ಯಾವ ಪ್ರಮಾಣದಲ್ಲಿದೆ ಎಂಬುದನ್ನು ರೆಡ್ ಡೇಟಾ ಬುಕ್ ಎಂಬ ಪುಸ್ತಕದಲ್ಲಿ ಕೊಡುತ್ತಾರೆ. ರೆಡ್ ಅಂದರೆ ಕೆಂಪು. ಕೆಂಪು ಅಪಾಯದ ಸೂಚನೆ. ಯಾವ ಜೀವಿಗಳು ಅಪಾಯದಲ್ಲಿವೆ ಎಂದು ಈ ಪುಸ್ತಕ ತಿಳಿಸುತ್ತದೆ. ಅವುಗಳ ಮುಖ್ಯ ವಿಂಗಡಣೆಗಳು ಹೀಗಿವೆ.
ಪೂರ್ತಿ ಗತಿಸಿಹೋದ ಪ್ರಾಣಿಗಳು.
                                ಯಾವ ಪ್ರಾಣಿಯ ಸಂತತಿ ಪೂರ್ತಿಯಾಗಿ ಗತಿಸಿಹೋಗಿದೆಯೋ ಅದನ್ನು "ಎಸ್ಟ್ರಿನ್ಕ್ಟ್" ಎಂದು ಕರೆಯುತ್ತಾರೆ. ನಮ್ಮ ದೇಶದಲ್ಲಿ ಇಂಡಿಯನ್ ಚೀತಾ ಪೂರ್ತಿಯಾಗಿ ಗತಿಸಿಹೋಗಿದೆ. ಬ್ರಿಟಿಷರ ಕಾಲದಲ್ಲಿ ಇವುಗಳನ್ನು ಬೇಟೆಯಾಡಲಾಗಿತ್ತು. ರಾಜಸ್ತಾನದ ಭಾಗಗಳಲ್ಲಿ ಇವುಗಳು ಹಿಂದೆ ಇದ್ದವು. ನೋಡಲು ಚಿರತೆ ರೀತಿ ಇರುತ್ತವೆ. ಆದರೆ ಗಾತ್ರ ಚಿಕ್ಕದು. ಇವುಗಳು ಅತಿ ವೇಗದ ಪ್ರಾಣಿಗಳು. ಆಫ್ರಿಕಾದಲ್ಲಿ ಮಾತ್ರ ಈಗ ನಾವು ಇವುಗಗಳನ್ನು ನೋಡಬಹುದು.  

0 ವರ್ಷದಲ್ಲಿ ಗತಿಸಿ ಹೋಗುವ ಸಂತತಿ

ಯಾವುದೇ ಪ್ರಾಣಿಗಳ ಸಂತತಿ ಪ್ರಪಂಚದಲ್ಲಿ 50ಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 90ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು ಕ್ರಿಟಿಕಲಿ ಎಂಡೇಂಜರ್ಡ್ ಎಂದು ಕರೆಯಲಾಗುತ್ತದೆ. ಅವುಗಳು ಗತಿಸಿ ಹೋಗುವ ಸಾಧ್ಯತೆ ತುಂಬ ಹೆಚ್ಚಿರುತ್ತದೆ. ಅವುಗಳ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂದಿನ 10 ವರ್ಷದಲ್ಲಿ ಗತಿಸಿ ಹೋಗುವ ಸಾಧ್ಯತೆ ಇರುತ್ತದೆ. ಅರುಣಾಚಲ ಪ್ರದೇಶದಲ್ಲಿನ ನಂದಪ ಹಾರುವ ಅಳಿಲುಗಳು ಈ ವಿಂಗಡಣೆಗೆ ಬರುತ್ತದೆ. ಇದನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತಿತ್ತು. ಪ್ರಪಂಚದ ಅತಿ ಚಿಕ್ಕ ಘೇಂಡಾಮೃಗಗಳಾದ ಸುಮಾತ್ರಾನ್ ಘೇಂಡಾಮೃಗಗಳು ಬೆರಳೆಣಿಕೆ ಪ್ರಮಾಣಕ್ಕೆ ಬಂದುಬಿಟ್ಟಿವೆ. ಹಿಮಾಲಯದ ಭಾಗಗಳಲ್ಲಿ ಇವುಗಳು ಕಂಡುಬರುತ್ತವೆ. ಅಂದಹಾಗೆ ರಣಹದ್ದುಗಳು ಕೂಡ ಈಗ ಕ್ರಿಟಿಕಲಿ ಎಂಡೇಜರ್ಡ್.

ಕಾಡು ನಾಯಿಗಳು, ಹುಲಿ ಹಾಗೂ ಆನೆಗಳು ಅಳಿವಿನಂಚಿನಲ್ಲಿವೆ.

ಯಾವ ಪ್ರಾಣಿಯ ಸಂತತಿ ಪ್ರಪಂಚದಲ್ಲಿ 250ಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 70ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು "ಎಂಡೇಂಜರ್ಡ್" ಎಂದು ಕರೆಯಲಾಗುತ್ತದೆ. ಅವುಗಳು ಗತಿಸಿ ಹೋಗುವ ಸಾಧ್ಯತೆ ಹೆಚ್ಚಿದ್ದು, ಅವುಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಕಾಡು ಕಟ್ಟೆಗಳು ಈ ಸಂತತಿಯಲ್ಲಿದ್ದು ಗುಜರಾತಿನ ರಣ್ ಆಫ್ ಕಚ್ ನ್ಯಾಷನಲ್ ಪಾರ್ಕ್ ನಲ್ಲಿ ಇವುಗಳನ್ನು ಸಂರಕ್ಷಿಸಲಾಗುತ್ತಿದೆ. ಹಿಮಾಲಯನ್ ಕಂದು ಬಣ್ಣದ ಕರಡಿಗಳು ಹಾಗೂ ಹಿಮ ತೋಳಗಳು ಕೂಡ ಅಳಿವಿನಂಚಿನ ಪ್ರಾಣಿಗಳು. ಕಾಡು ನಾಯಿಗಳು, ಹುಲಿ ಹಾಗೂ ಆನೆಗಳು ಕೂಡ ಈ ಪರಿಸ್ಥಿತಿಯಲ್ಲಿವೆ. ಘೇಂಡಾಮೃಗಗಳು ಎಂಡೇಂಜರ್ಡ್ ಆಗಿದ್ದು, ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಸಂರಕ್ಷಿಸಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಕಂಡುಬರುವ ಕಾಡೆಮ್ಮೆಗಳು


ಯಾವ ಪ್ರಾಣಿಯ ಸಂತತಿ ಪ್ರಪಂಚದಲ್ಲಿ 10 ಸಾವಿರಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 50ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು ವಲ್ನರಬಲ್ ಎಂದು ಕರೆಯಲಾಗುತ್ತದೆ. ಹುಲ್ಲೇಕರ, ದಕ್ಷಿಣ ಭಾರತದಲ್ಲಿ ಕಂಡು ಬರುವ ಕಾಡೆಮ್ಮೆಗಳು, ನಾಲ್ಕು ಕೊಂಬಿನ ಜಿಂಕೆ, ಕಪ್ಪು ಕರಡಿ, ಕೆಂಪು ಪಾಂಡ ಇವೆಲ್ಲವೂ ಈ ವಿಂಗಡಣೆ ಅಡಿಯಲ್ಲಿ ಬರುತ್ತವೆ. ಕೆಂಪು ಪಾಂಡಗಳನ್ನು ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ಕಾಣಬಹುದು. ಇವುಗಳ ಚರ್ಮಕ್ಕಾಗಿ ಕೊಲ್ಲಲಾಗುತ್ತಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ

ವನ್ಯಜೀವಿಗಳ ಸಂರಕ್ಷಣೆಗೆಂದು ಕೇಂದ್ರ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ನು 1972ರಲ್ಲಿ ಜಾರಿ ಮಾಡಿತು. ಅದರಲ್ಲಿ 6 ಶೆಡ್ಯೂಲ್ ಗಳಿವೆ. ಯಾವ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆಯೋ ಅವೆಲ್ಲವನ್ನು ಶೆಡ್ಯೂಲ್ 1ರಲ್ಲಿ ತರಲಾಯಿತು. ಹುಲಿ, ಸಿಂಹ, ಘೇಂಡಾಮೃಗ, ಹುಲ್ಲೇಕರ ಇವೆಲ್ಲ ಶೆಡ್ಯೂಲ್ 1ರ ಅಡಿ ಬರುತ್ತದೆ. ಇವುಗಳನ್ನು ಕೊಂದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿರುತ್ತದೆ. ಅಂದಹಾಗೆ ಹುಲ್ಲೇಕರವನ್ನು ಕೊಂದರೆ ಹುಲಿ ಕೊಂದಷ್ಟೇ ಗಂಭೀರವಾದ ಅಪರಾಧ.

ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ
ಸರ್ಕಾರವು ವನ್ಯಜೀವಿಗಳ ಸಂರಕ್ಷಣೆಗೆಂದು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನು ಮಾಡಿದೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಿಗೆ ಇರುವ ವತ್ಯಾಸ ಏನೆಂದರೆ, ಅಭಯಾರಣ್ಯದಲ್ಲಿ ಮನುಷ್ಯರ ಯಾವುದೇ ಚಟುವಟಿಕೆಗೆ ಅನುಮತಿ ಇಲ್ಲ. ಸ್ಥಳೀಯರಿಗೂ ಕೂಡ ಇಲ್ಲಿ ನಿರ್ಬಂಧವಿರುತ್ತದೆ. ರಾಷ್ಟ್ರೀಯ ಉದ್ಯಾನಗಳಲ್ಲಿ ಸ್ಥಳೀಯರು 
ತಮ್ಮ ಚಟುವಟಿಕೆ ನಡೆಸಲು ಅನುಮತಿ ಇರುತ್ತದೆ. ಅಂದಹಾಗೆ ಸರಕಾರ ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಎಲಿಫೆಂಟ್ ಹೀಗೆ ಅನೇಕ ಯೋಜನೆಗಳನ್ನು ತಂದಿದೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಕೂಡ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿವೆ.

ವಿದ್ಯಾರ್ಥಿ ವೇತನ ಲಿಂಕಗಳು.









ವಿದ್ಯಾರ್ಥಿ ವೇತನ ಪಡೆಯಲು ಇಚ್ಛಿಸುವ ಬಡ ವಿದ್ಯಾರ್ಥಿಗಳಿಗೆ ಇಲ್ಲಿದೆ ವಿದ್ಯಾರ್ಥಿ ವೇತನದ ಎಲ್ಲ ಲಿಂಕಗಳು:


                           ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.*

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -

www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 

www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in


೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 

www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org


೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 

www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 

www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 

www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 

www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 

www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org


12. *ವಿದ್ಯಸಿರಿ* *ಮತ್ತು ಶುಲ್ಕ* *ವಿನಾಯಿತಿ*

http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. *ಸರ್ಕಾರದ* *ಧನಸಹಾಯಗಳ* *ವೆಬ್ ವಿಳಾಸ*


http://karepass.cgg.gov.in/ 

14. *ಜಿಂದಾಲ್ scholarship*


 http://www.sitaramjindalfoundation.org/scholarships.php 

15. *B.L ಹೇಮವತಿ ಧನಸಹಾಯ*


 http://www.blhtrust.org/schpro.html 

16. *ಕೇಂದ್ರ ಸರ್ಕಾರದ ಧನಸಹಾಯಗಳು*


Central Govt Scholarship

     http://mhrd.gov.in/ 

17.  *Indian Oil Scholarship*

     https://www.iocl.com/AboutUs/AcademicScholarships.   


*ದಯವಿಟ್ಟು Share ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ.*

ಸರಸ್ವತಿ ಸಮ್ಮಾನ್ ಪುರಸ್ಕಾರ


ಸರಸ್ವತಿ ಸಮ್ಮಾನ್ ಪುರಸ್ಕಾರ 


ಸರಸ್ವತಿ ಸಮ್ಮಾನ್ ಇದು ಭಾರತೀಯ ಭಾಷೆಗಳಲ್ಲಿ ಬರೆಯುವ ಶ್ರೇಷ್ಠ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ. ಇದನ್ನು ವಿದ್ಯೆಯ ದೇವಿಯಾಗಿರುವ ಸರಸ್ವತಿಯ ಹೆಸರಿನಲ್ಲಿ ಸ್ಥಾಪಿತವಾಗಿರುತ್ತದೆ. ಇದು ಸಾಹಿತ್ಯದ ಒಂದು ಉನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ೫ಲಕ್ಷ ರೂಪಾಯಿ ನಗದನ್ನು ಹೊಂದಿದೆ. ಕೆ. ಕೆ. ಬಿರ್ಲಾ ಪ್ರತಿಷ್ಥಾನವು ಈ ಪ್ರಶಸ್ತಿಯನ್ನು ೧೯೯೧ರಲ್ಲಿ ಸ್ಥಾಪಿಸಿತು.


1991ರಿಂದ 2017 ರವರೆಗೆ ಗೌರವ ಪುರಸ್ಕೃತರು:

* *2016: ಮಹಾಬಲೇಶ್ವರ ಸೇಯ್ಲ್ - "ಹಾಥನ್" (ಕಾದಂಬರಿ) - ಕೊಂಕಣಿ*

*  *ಪದ್ಮ ಸಚ್ದೇವ್ - "ಚಿಟ್-ಚೆಟೆ" (ಆಟೋಬಯಾಗ್ರಫಿ) - ಡೋಗ್ರಿ*

* *2014: ವೀರಪ್ಪ ಮೊಯ್ಲಿ - "ರಾಮಾಯಣ ಮಹನ್ವೇಷನ್" (ಕವಿತೆ) - ಕನ್ನಡ*

* *2013: ಗೋವಿಂದ ಮಿಶ್ರಾ - "ಧುಲ್ ಪೌಡೋ ಪರ್" (ಕಾದಂಬರಿ) - ಹಿಂದಿ*

* *2012: ಸುಗತ ಕುಮಾರಿ - "ಮನಲೆಝುತು" (ಕವನ ಸಂಗ್ರಹ) - ಮಲೆಯಾಳಂ*

* *2011: ಎ. ಎ. ಮನವಲನ್ - "ಇರಾಮಾ ಕಥೈಮ್ ಇರಮಯಕಲ್ಲುಂ" - ತಮಿಳು*

* *2010: ಎಸ್. ಎಲ್. ಭೈರಪ್ಪ - "ಮಂದ್ರ" - ಕನ್ನಡ*

* *2009: ಸುರ್ಜಿತ್ ಪಾತಾರ್ - "ಲಫ್ಜನ್ ಡಿ ದರ್ಗಾ" - ಪಂಜಾಬಿ*

* *2008: ಲಕ್ಷ್ಮಿ ನಂದನ್ ಬೋರಾ - "ಕಯಕಲ್ಪ" (ಕಾದಂಬರಿ) - ಅಸ್ಸಾಮಿ*

* *2007: ನಯೆರ್ ಮಸೂದ್ - "ಟಾವೋಸ್ ಚಾಮನ್ ಕಿ ಮೈನಾ" (ಸಣ್ಣ ಕಥೆಗಳ ಸಂಗ್ರಹ) - ಉರ್ದು*

* *2006: ಜಗನ್ನಾಥ್ ಪ್ರಸಾದ್ ದಾಸ್ - "ಪರಿಕಾರಿಮಾ" (ಕವನ ಸಂಗ್ರಹ) - ಒರಿಯಾ*

* *2005: ಕೆ. ಅಯ್ಯಪ್ಪ ಪಾಣಿಕರ್ - "ಅಯ್ಯಪ್ಪ ಪಣಿಕಾರ್ಡು ಕೃತಿಕಳ್" (ಕವನ ಸಂಗ್ರಹ) - ಮಲಯಾಳಂ*

* *2004: ಸುನೀಲ್ ಗಂಗೋಪಾಧ್ಯಾಯ್ - "ಪ್ರತಮ್ ಅಲೋ" (ಕಾದಂಬರಿ) - ಬೆಂಗಾಲಿ*

* *2003: ಗೋವಿಂದ ಚಂದ್ರ ಪಾಂಡೆ - "ಭಾಗಿರಥಿ" (ಕವನ ಸಂಗ್ರಹ) - ಸಂಸ್ಕೃತ*

* *2002: ಮಹೇಶ್ ಎಲ್ಕುಂಚ್ವರ್ - "ಯುಗಾಂಟ್" (ಪ್ಲೇ) - ಮರಾಠಿ*

* *2001: ದಲಿಪ್ ಕೌರ್ ತಿವಾನಾ - "ಕಥಾ ಕಹೋ ಉರ್ವಾಶಿ" (ಕಾದಂಬರಿ) - ಪಂಜಾಬಿ*

* *2000: ಮನೋಜ್ ದಾಸ್ - "ಅಮೃತ ಫಾಲಾ" (ಕಾದಂಬರಿ) - ಒರಿಯಾ*

* *1999: ಇಂದಿರಾ ಪಾರ್ಥಸಾರಥಿ - "ರಾಮನುಜರ್" (ಪ್ಲೇ) - ತಮಿಳು*

* *1998: ಶಂಖ ಘೋಷ್ - "ಗಂಧರ್ಬಾ ಕಬಿತಾ ಗುಚ" (ಕವನ ಸಂಗ್ರಹ) - ಬಂಗಾಳಿ*

* *1997: ಮನುಭಾಯ್ ಪಾಂಚಲಿ - "ಕುರುಕ್ಷೇತ್ರ" - ಗುಜರಾತಿ*

* *1996: ಶಾಮ್ಸುರ್ ರಹಮಾನ್ ಫರುಖಿ - "ಷೆರ್-ಇ-ಶೋರ್-ಆಂಗೆಜ್" - ಉರ್ದು*

* *1995: ಬಾಲಮಣಿ ಅಮ್ಮ - "ನಿವೇದ್ಯಾಮ್" (ಕವನ ಸಂಗ್ರಹ) - ಮಲೆಯಾಳಂ*

* *1994: ಹರಭಜನ್ ಸಿಂಗ್ - "ರುಕ್ ತೆ ರಿಷಿ" (ಕವನ ಸಂಗ್ರಹ) - ಪಂಜಾಬಿ*

* *1993: ವಿಜಯ್ ತೆಂಡೂಲ್ಕರ್ - "ಕನ್ಯಾಡಾನ್" (ಪ್ಲೇ) - ಮರಾಠಿ*

* *1992: ರಾಮಕಾಂತ್ ರಾಥ್ - "ಶ್ರೀ ರಾಧಾ" (ಕವನ) - ಒರಿಯಾ*

* *1991: ಹರಿವಂಶ್ ರಾಯ್ ಬಚ್ಚನ್ - ನಾಲ್ಕು ಸಂಪುಟಗಳಲ್ಲಿ ಆತ್ಮಚರಿತ್ರೆ (ಆಟೋಬಯಾಗ್ರಫಿ) - ಹಿಂದಿ*
       
ಸಂಗ್ರಹ: ಆರುಶಿ (ಸಹ ಶಿಕ್ಷಕರು)
ಎಮ್.ಪಿ.ಕೆ.ಬಿ.ಎಸ್.ದೇ.ಹಿ
 ‌‌

ಶುಕ್ರವಾರ, ಮಾರ್ಚ್ 2, 2018

ಜಗತ್ತಿನ ಕ್ರೀಡಾಂಗಣಗಳು


*ಜಗತ್ತಿನ ಕ್ರೀಡಾಂಗಣಗಳು*

  ===========
*ಭಾರತದಲ್ಲಿ ಕ್ರೀಡಾಂಗಣಗಳು*
     *************
* *ಬರಾಬಾಟಿ ಕ್ರೀಡಾಂಗಣ: ಕಟಕ್*
* *ಬರ್ಕತುಲ್ಲಾ ಖಾನ್ ಕ್ರೀಡಾಂಗಣ: ಜೋಧ್ಪುರ್*
* *ಬ್ರಬೌರ್ನೆ ಕ್ರೀಡಾಂಗಣ: ಮುಂಬೈ*
* *ಈಡನ್ ಗಾರ್ಡನ್ಸ್: ಕೊಲ್ಕತ್ತಾ*
* *ಫಿರೋಜ್ ಶಾ ಕೋಟ್ಲಾ: ದೆಹಲಿ*
* *ಗಾಂಧಿ ಕ್ರೀಡಾಂಗಣ: ಜಲಂಧರ್*
* *ಗ್ರೀನ್ ಪಾರ್ಕ್: ಕಾನ್ಪುರ್*
* *ಇಂದಿರಾ ಗಾಂಧಿ ಕ್ರೀಡಾಂಗಣ: ವಿಜಯವಾಡಾ*
* *ರಾಜೀವ್ ಗಾಂಧಿ ಪೋರ್ಟ್ ಸಿಲ್ವರ್ ಜುಬಿಲೀ*
 * *ಕ್ರೀಡಾಂಗಣ: ವಿಶಾಖಪಟ್ಟಣಂ*
* *ಜವಾಹರಲಾಲ್ ನೆಹರು ಕ್ರೀಡಾಂಗಣ: ನವ ದೆಹಲಿ*
* *ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ: ಹೈದರಾಬಾದ್*
* *ಎಂ. ಚಿನ್ನಸ್ವಾಮಿ ಕ್ರೀಡಾಂಗಣ: ಬೆಂಗಳೂರು*
* *ಎಂ.ಎ ಚಿದಂಬರಂ ಕ್ರೀಡಾಂಗಣ: ಚೆನ್ನೈ*
* *ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನ: ರಾಜ್ಕೋಟ್*
* *ಮೊಯಿನ್-ಉಲ್-ಹಕ್ ಕ್ರೀಡಾಂಗಣ: ಪಾಟ್ನಾ*
* *ಸರ್ದಾರ್ ವಲ್ಲಭಾಯಿ ಪಟೇಲ್ ಮೋತೆರಾ*
* *ಕ್ರೀಡಾಂಗಣ: ಅಹಮದಾಬಾದ್*
* *ಸವಾಯಿ ಮಾನ್ಸಿಂಗ್ ಕ್ರೀಡಾಂಗಣ: ಜೈಪುರ*
* *ವಿದರ್ಭ ಸಿಎ ಮೈದಾನ: ನಾಗಪುರ*
* *ವಾಂಖೇಡೆ ಕ್ರೀಡಾಂಗಣ: ಮುಂಬೈ*
=============

*ಆಸ್ಟ್ರೇಲಿಯಾದಲ್ಲಿನ ಕ್ರೀಡಾಂಗಣಗಳು*

       ************
* *ಅಡಿಲೇಡ್ ಓವಲ್: ಅಡಿಲೇಡ್*
* *ಬುಂಡಬರ್ಗ್ ರಮ್ ಕ್ರೀಡಾಂಗಣ: ಕೈರ್ನ್ಸ್*
* *ಟೆಲ್ಸ್ಟ್ರಾ ಡೋಮ್: ಮೆಲ್ಬರ್ನ್*
* *ಮನುಕಾ ಓವಲ್: ಕ್ಯಾನ್ಬೆರಾ*
* *ಮಾರರಾ ಕ್ರಿಕೆಟ್ ಮೈದಾನ: ಡಾರ್ವಿನ್*
* *ಮೆಲ್ಬರ್ನ್ ಕ್ರಿಕೆಟ್ ಮೈದಾನ: ಮೆಲ್ಬರ್ನ್*
* *ಸಿಡ್ನಿ ಕ್ರಿಕೆಟ್ ಮೈದಾನ: ಸಿಡ್ನಿ*
* *ಡಬ್ಲು.ಎ.ಸಿ.ಎ. ಗ್ರೌಂಡ್: ಪರ್ತ್*
=============

*ಬಾಂಗ್ಲಾದೇಶದ ಕ್ರೀಡಾಂಗಣಗಳು*

************
* *ಬಂಗಾಬಂದ ರಾಷ್ಟ್ರೀಯ ಕ್ರೀಡಾಂಗಣ: ಢಾಕಾ*
* *ಚಿತ್ತಗಾಂಗ್ ಕ್ರೀಡಾಂಗಣ: ಚಿತ್ತಗಾಂಗ್*
=============

*ಇಂಗ್ಲೆಂಡ್ನಲ್ಲಿ ಕ್ರೀಡಾಂಗಣಗಳು*

       *********
* *ಎಡ್ಜ್ಬಾಸ್ಟನ್:*
*ಬರ್ಮಿಂಗ್ಹ್ಯಾಮ್*
* *ಹೆಡಿಂಗ್ಲೆ: ಲೀಡ್ಸ್*
* *ಲಾರ್ಡ್ಸ್: ಲಂಡನ್*
* *ಓಲ್ಡ್ ಟ್ರಾಫರ್ಡ್: ಮ್ಯಾಂಚೆಸ್ಟರ್*
* *ಸೋಫಿಯಾ ಗಾರ್ಡನ್ಸ್: ಕಾರ್ಡಿಫ್*
* *ಸೇಂಟ್ ಲಾರೆನ್ಸ್ ಗ್ರೌಂಡ್: ಕ್ಯಾಂಟರ್ಬರಿ*
* *ಬ್ರಿಟ್ ಓವಲ್: ಲಂಡನ್*
* *ಟ್ರೆಂಟ್ ಬ್ರಿಜ್:* *ನಾಟಿಂಗ್ಹ್ಯಾಮ್*
==============

*ನ್ಯೂಜಿಲೆಂಡ್ನಲ್ಲಿ ಕ್ರೀಡಾಂಗಣಗಳು*

**********
* *ಬೇಸಿನ್ ರಿಸರ್ವ್: ವೆಲ್ಲಿಂಗ್ಟನ್*
* *ಈಡನ್ ಪಾರ್ಕ್: ಆಕ್ಲೆಂಡ್*
* *ಜೇಡ್ ಕ್ರೀಡಾಂಗಣ: ಕ್ರೈಸ್ಟ್ಚರ್ಚ್*
* *ಜಾನ್ ಡೇವಿಸ್ ಓವಲ್: ಕ್ವೀನ್ಸ್ಟೌನ್*
* *ಮ್ಯಾಕ್ಲೀನ್ ಪಾರ್ಕ್: ನೇಪಿಯರ್*
=========

*ಪಾಕಿಸ್ತಾನದ ಕ್ರೀಡಾಂಗಣಗಳು* 

       ***********
* *ಅರ್ಬಬ್ ನಿಯಾಝ್ ಕ್ರೀಡಾಂಗಣ: ಪೆಶಾವರ್*
* *ಆಯುಬ್ ರಾಷ್ಟ್ರೀಯ ಕ್ರೀಡಾಂಗಣ: ಕ್ವೆಟ್ಟಾ*
* *ಗಡ್ಡಾಫಿ ಕ್ರೀಡಾಂಗಣ: ಲಾಹೋರ್*
==========

*ವೆಸ್ಟ್ ಇಂಡೀಸ್ನಲ್ಲಿ ಕ್ರೀಡಾಂಗಣಗಳು*

***********
* *ಸಬಿನ ಪಾರ್ಕ್ ಕಿಂಗ್ಸ್ಟನ್: ಜಮೈಕಾ*
* *ಆಂಟಿಗುವಾ ರಿಕ್ರಿಯೇಶನ್ ಗ್ರೌಂಡ್ ಸೇಂಟ್ ಜಾನ್ಸ್: ಆಂಟಿಗುವಾ*
* *ಗಯಾನಾ ಕ್ರಿಕೆಟ್ ಸ್ಟೇಡಿಯಂ ಜಾರ್ಜ್ಟೌನ್: ಗಯಾನಾ*
* *ಕೆನ್ಸಿಂಗ್ಟನ್ ಓವಲ್ ಬ್ರಿಡ್ಜ್ಟೌನ್: ಬಾರ್ಬಡೋಸ್*
* *ಮಿಂಡೂ ಫಿಲಿಪ್ ಪಾರ್ಕ್ Castries: ಸೇಂಟ್ ಲೂಸಿಯಾ*
* *ಅಲ್ಬಿಯನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬರ್ಬೀಸ್: ಗಯಾನಾ*
===========

* *ಶ್ರೀಲಂಕಾದ ಕ್ರೀಡಾಂಗಣಗಳು*

        *********
* *ಕೊಲಂಬೊ ಕ್ರಿಕೆಟ್ ಕ್ಲಬ್ ಗ್ರೌಂಡ್: ಕೊಲಂಬೊ*
* *ಗಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ: ಗಲ್ಲಿ*
* *ಪಿ.ಸಾರವಣಟ್ಟು ಕ್ರೀಡಾಂಗಣ: ಕೊಲಂಬೊ*
* *ಆರ್.ಪ್ರೆಮಾದಾಸ ಕ್ರೀಡಾಂಗಣ: ಕೊಲಂಬೊ*
* *ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್-ಕೊಲಂಬೊ*
==============

*ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾಂಗಣಗಳು*

    **********
* *ಕಿಂಗ್ಸ್ಮೀಡ್: ಡರ್ಬನ್*
* *ಹೊಸ ವಾಂಡರರ್ಸ್ ಕ್ರೀಡಾಂಗಣ: ಜೋಹಾನ್ಸ್ಬರ್ಗ್*
* *ನ್ಯೂಲ್ಯಾಂಡ್ಸ್: ಕೇಪ್ ಟೌನ್*
* *ಸೇಂಟ್ ಜಾರ್ಜ್ಸ್ ಪಾರ್ಕ್: ಪೋರ್ಟ್ ಎಲಿಜಬೆತ್*
* *ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್: ಪ್ರಿಟೋರಿಯಾ*
===============

*ಜಿಂಬಾಬ್ವೆ ಕ್ರೀಡಾಂಗಣಗಳು*

      ***********
* *ಬುಲಾವೇಯೋ ಅಥ್ಲೆಟಿಕ್ ಕ್ಲಬ್: ಬುಲಾವೇಯೋ*
* *ಹರಾರೆ ಸ್ಪೋರ್ಟ್ಸ್ ಕ್ಲಬ್: ಹರಾರೆ*
* *ಕ್ವೆಕ್ವೆ ಸ್ಪೋರ್ಟ್ಸ್ ಕ್ಲಬ್: ಕ್ವೆಕ್ವೆ*
* *ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್: ಬುಲಾವೇಯೋ*
===========

*ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕ್ರೀಡಾಂಗಣಗಳು*

     ***********
* *ಶೇಖ್ ಜಾಯೆದ್ ಕ್ರೀಡಾಂಗಣ: ಅಬುಧಾಬಿ*
* *ಶಾರ್ಜಾ ಕ್ರಿಕೆಟ್ ಕ್ರೀಡಾಂಗಣ: ಶಾರ್ಜಾ*
==============

ರಾಷ್ಟ್ರೀಯ ವಿಜ್ಞಾನ ದಿನ

ರಾಷ್ಟ್ರೀಯ ವಿಜ್ಞಾನ ದಿನ ಪೆ.೨೮




*ಇಂದು ರಾಷ್ಟ್ರೀಯ ವಿಜ್ಞಾನ ದಿನ*

*ಜೈ ವಿಜ್ಞಾನ್, ಜೈ ವಿಜ್ಞಾನ್*
 *ರಾಷ್ಟ್ರೀಯ ವಿಜ್ಞಾನ ದಿನ:  ದೇಶಾದ್ಯಂತ ಫೆಬ್ರವರಿ 28ಅನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತದೆ. 1999ರಿಂದ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ವಿಜ್ಞಾನ ದಿನದಂದು ಚರ್ಚಿಸಲಾಗುವ ವಿಷಯವನ್ನು ಮೊದಲೇ ಘೋಷಿಸುತ್ತದೆ. ಏತಕ್ಕಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂಬ ಬಗ್ಗೆ ಕಿರು ಮಾಹಿತಿ ಇಲ್ಲಿದೆ.*

*ಏನಿದು ರಾಷ್ಟ್ರೀಯ ವಿಜ್ಞಾನ ದಿನ*


*ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್‌ ಸಿ.ವಿ.ರಾಮನ್‌ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಮನ್‌ ಅವರು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ.1928ರ ಫೆಬ್ರವರಿ 28ರಂದು ಬೆಳಕಿನ ಚದುರಿವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷ ಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದ ದಿನ. ಮುಂದಿನ ದಿನಗಳಲ್ಲಿ ಅದು ರಾಮನ್‌ ಪರಿಣಾಮವೆಂದೇ ಪ್ರಸಿದ್ಧವಾಯಿತು. ಈ ಹಿನ್ನೆಲೆಯಲ್ಲಿ 1987 ಫೆಬ್ರವರಿ 28ರಂದು ದೇಶಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ.*

👉 *ಆಚರಣೆಯ ಉದ್ದೇಶ*


*ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ, ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ ಹೀಗೆ ನಾನಾ ಚಟುವಟಿಕೆಗಳನ್ನು ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.*

🔬👉 *ರಾಮನ್‌ ಕುರಿತಂತೆ*


*ವಿಜ್ಞಾನದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ.ವಿ. ರಾಮನ್‌ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್‌ . ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ 1888ರ ನವೆಂಬರ್‌ 7ರಂದು . ಅವರ ತಂದೆ ಚಂದ್ರಶೇಖರ್‌ ಅಯ್ಯರ್‌ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ರಾಮನ್‌ ಅವರು ಕಲ್ಕತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಮುಂದೆ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.*

*ರಾಮನ್‌ ಪರಿಣಾಮ*


*ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್‌ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್‌ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯ ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು. ಕೋಲ್ಕತಾದ ಇಂಡಿಯನ್‌ ಅಸೋಸಿಯೇಷನ್‌ ಫಾರ್‌ ಕಲ್ಟಿವೇಷನ್‌ ಆಫ್‌ ಸೈನ್ಸ್‌ನಲ್ಲಿ ರಾಮನ್‌ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್‌ ಪರಿಣಾಮದ ಶೋಧ. ಇದೇ ಸಾಧನೆಗಾಗಿ ಅವರಿಗೆ 1930ನೇ ಇಸವಿಯಲ್ಲಿ ನೊಬೆಲ್‌ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್‌ ಪುರಸ್ಕಾರವೂ ಹೌದು.*

  🔬✍ *ಫೆಬ್ರುವರಿ 28 ರಂದು ದೇಶದಾದ್ಯಂತ ವಿಜ್ಞಾನದ ದಿನವನ್ನಾಗಿ ಆಚರಿಸುತ್ತೇವೆ. ಅಂದು ಡಾ: ಸರ್. ಸಿ.ವಿ. ರಾಮನ್ ರವರು ‘ರಾಮನ್ ಪರಿಣಾಮ’ ಎಂಬ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ನಿರೂಪಿಸಿ ತೋರಿಸಿದ ದಿನ.*

👉 *ರಾಮನ್ ಪರಿಣಾಮದ ಮಹತ್ವ :*


*ಇಂದು `ರಾಮನ್ ಪರಿಣಾಮ’ ದ್ರವ್ಯದ ಅಣುರಚನೆಯನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಮೈಕ್ರೋವೇವ್, ಲೇಸರ್, ಇನ್ಫ್ರಾರೆಡ್, ಅಲ್ಟ್ರಾ ವಯೋಲೆಟ್, ಮತ್ತು ಕ್ಷ-ಕಿರಣ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ಭೌತ, ಜೀವ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ಇದರ ಪರಿಣಾಮವಿದೆ.*

*ರಾಮನ್ ಪರಿಣಾಮ ಕುರಿತು ಆಲ್ಬರ್ಟ್ ಐನ್ಸ್ಟೀನ್ ಸರಳವಾಗಿ ಈ ರೀತಿ ಹೇಳಿದ್ದಾರೆ: “ವಸ್ತುವಿನಲ್ಲಿ ಬೆಳಕಿನ ಚದುರುವಿಕೆಯಿಂದ ಬೆಳಕಿನ ಶಕ್ತಿಯಲ್ಲಾಗುವ ಬದಲಾವಣೆಯನ್ನು ಗುರುತಿಸಿದವರಲ್ಲಿ ರಾಮನ್ ಮೊದಲಿಗರು. ನನಗಿನ್ನೂ ಸ್ಪಷ್ಟವಾಗಿ ನೆನಪಿದೆ – ಬರ್ಲಿನ್ನಿನ ಭೌತಶಾಸ್ತ್ರ ಗೋಷ್ಟಿಯಲ್ಲಿ ಭಾಗವಹಿಸಿದ ನಮ್ಮೆಲ್ಲರ ಮೇಲೆ ಈ ಆವಿಷ್ಕಾರ ಗಾಢ ಪರಿಣಾಮ ಬೀರಿತ್ತು”.*

*ಇಂದಿನ ದುರಂತವೆಂದರೆ, ‘ರಾಮನ್ ಪರಿಣಾಮ’ ವನ್ನು ಈ ದೇಶದಲ್ಲಿಯೇ ಆವಿಷ್ಕರಿಸಿದ್ದರೂ ಕೂಡ, ಈ ಪರಿಣಾಮದ ಆಧಾರದಲ್ಲಿ ಕಾರ್ಯನಿರ್ವಹಿಸುವ ಲೇಸರ್ ಉಪಕರಣಗಳನ್ನು ತಯಾರಿಸಲಾಗದೇ ಇಂದಿಗೂ ಆಮದು ಮಾಡಿಕೊಳ್ಳುತ್ತಿದ್ದೇವೆ.*

✍  *ಸ್ವಾವಲಂಬಿ ಸಂಶೋಧನಾಲಯಗಳ ಸ್ಥಾಪನೆ :*


*ಬಂಗಾಳದಲ್ಲಿ ರಾಜ್ಯ ವಿಭಜನೆ ವಿರುದ್ದ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ತೀವ್ರಗೊಂಡಿದ್ದ ಕಾಲವದು. ಇದರಿಂದಾಗಿ ಪ್ರತಿಷ್ಟಿತ ವಿಜ್ಞಾನ ಸಂಸ್ಥೆಗಳಲ್ಲಿ ಭಾರತೀಯರೇ ಹುದ್ದೆ ಅಲಂಕರಿಸಬೇಕೆಂದು ಕೋಲ್ಕತ್ತಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಇದರಿಂದಾಗಿ ಪ್ರತಿಭಾನ್ವಿತ ರಾಮನ್ರವರು ತಾವು ಕೆಲಸ ಮಾಡುತ್ತಿದ್ದ ಐಸಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಪ್ರೊಫೆಸರ್ ಹುದ್ದೆಗೆ ವಿಶ್ವವಿದ್ಯಾಲಯ ಸೇರಿದರು.*

*1921 ರಲ್ಲಿ ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಹಡಗಿನಲ್ಲಿ ಭಾರತಕ್ಕೆ ರಾಮನ್ ಪ್ರಯಾಣಿಸುತ್ತಿದ್ದರು. ಆಗವರು ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದರು. ಅಷ್ಟರಲ್ಲಾಗಲೇ ಅವರು ದೃಗ್ವಿಜ್ಞಾನ ಮತ್ತು ಧ್ವನಿ ವಿಜ್ಞಾನಗಳ ಅಧ್ಯಯನದಲ್ಲಿ ನಡೆಸಿರುವ ಸಂಶೋಧನೆ ಕುರಿತು ಇಂಗ್ಲೆಂಡ್ನ ಜೆ.ಜೆ. ಥಾಮ್ಸನ್ ಮತ್ತು ಲಾರ್ಡ್ ರುದರ್ಪೋರ್ಡರಂತಹ ವಿಜ್ಞಾನಿಗಳ ಗಮನ ಸೆಳೆದರು.


ಭಾರತೀಯ ಸಂವಿಧಾನ ಕುರಿತ ಸಾಮಾನ್ಯಜ್ಞಾನ


1) ಅಶೋಕ ಚಕ್ರದ ಸಂಕೇತವೇನು?
 * ನಿರಂತರ ಚಲನೆ.

2) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
 * ಆಯತ.

3) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
 * ಜನತ ನ್ಯಾಯಾಲಯ.

4) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
 * ಮಂಡೋಕ ಉಪನಿಷತ್.

5) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
 * ಚೈತ್ರಮಾಸ.

6) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
 * 01/02/1992.

7) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
 * ರಾಷ್ಟ್ರಪತಿ.

8) ಎಂ.ಪಿ. ವಿಸ್ತರಿಸಿರಿ?
 * ಮೆಂಬರ್ ಆಫ್ ಪಾರ್ಲಿಮೆಂಟ್.

9)ಭಾರತದ ಪ್ರಥಮ ಪ್ರಜೆ ಯಾರು?
 * ರಾಷ್ಟ್ರಪತಿ.

10) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
 * ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).

11) ಸಂವಿಧಾನದ ಹೃದಯ ಯಾವುದು?
 * ಪ್ರಸ್ತಾವನೆ/ಪೀಠಿಕೆ.

12) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
 * 5 ವರ್ಷಗಳು.

13) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
  * ಉಪ ರಾಷ್ಟ್ರಪತಿ.

14) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
 * ನವದೆಹಲಿ.

15) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
 * ದೆಹಲಿ.

16) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
 * ಏರ್ ಚೀಫ್ ಮಾರ್ಷಲ್.

17) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
 * ರಾಷ್ಟ್ರಪತಿ ಭವನ.

18) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
 * ವಿಧಾನಸಭೆಯ ಸದಸ್ಯರು (238).

19) ನೆಹರುರವರ ಪ್ರೀತಿಯ ಹೂ ಯಾವುದು?
 * ಕೆಂಪು ಗುಲಾಬಿ.

20) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
 * ಬೆಂಗಳೂರು.

21) ಸಿಬರ್ಡ್ ನೌಕಾನೆಲೆ ಎಲ್ಲಿದೆ?
 * ಕಾರವಾರ.

22) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
 * ಭಾರತ.

23) ಎನ್.ಸಿ.ಸಿ ವಿಸ್ತರಿಸಿರಿ?
 * ನ್ಯಾಷನಲ್ ಕ್ಯಾಡೇಟ್ ಕೋರ್.

24) ಸಂಸತ್ತಿನ ಕೆಳಮನೆ ಯಾವುದು?
 * ಲೋಕಸಭೆ.

25) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
 * 25.

26) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
 * 35.

27) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
 * 6.

28) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
 * ಜಮ್ಮು&ಕಾಶ್ಮೀರ.

29) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
 * ದೆಹಲಿ.

30) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
 * 3:2.

31) ಭಾರತೀಯ ಸಂಸ್ಕೃತಿಯ ನಿಲುವೇನು?
 * ಬಾಳು,ಬಾಳುಗೊಡು.

32) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
 * 24.

33) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
 * 340.

34)  ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
 * 1929.

35ಎಮ್.ಎಲ್.ಸಿ ವಿಸ್ತರಿಸಿರಿ?
 * ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

36) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
 * ಭಾರತ.

37) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
 * 12.

38) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
 * ಮೂಲಭೂತ ಕರ್ತವ್ಯ.

39 ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

40) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1964.

41) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
 * 5.

42) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
 * ಮೇಘನಾದ ಸಹಾ.

43) ನಮ್ಮ ದೇಶದ ಹಾಡು ಯಾವುದು?
 * ವಂದೇ ಮಾತರಂ.

44) "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
 * ಬಂಕಿಮ ಚಂದ್ರ ಚಟರ್ಜಿ.

45) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
 * ಸಂವಿಧಾನ ಸಭೆ.

46) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
 * ಮೂಲಭೂತ ಹಕ್ಕುಗಳು.

47) ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
 * 97 ಬಾರಿ.

48) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
 * 6 (ದ್ವಿಸದನ ಪದ್ದತಿ).

49) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
 * 30 ವರ್ಷಗಳು.

50) ಎಮ್.ಎಲ್.ಎ ವಿಸ್ತರಿಸಿರಿ?
 * ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

51) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
 * ಆಡ್ಮಿರಲ್.

52) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
 * ರಾಷ್ಟ್ರಪತಿ.

53ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
 * 26 ನವೆಂಬರ್ 1949.

54) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
 * 1946.


JNAANASAMPAD

ನಳಂದ ವಿಶ್ವವಿದ್ಯಾಲಯ

ಭಾರತದ ಪುರಾತನ ಕಾಲದ ಜ್ಞಾನದ ಖನಜ  "ನಾಲಂದಾ ವಿಶ್ವವಿದ್ಯಾಲಯ"  ━━━━━━━━━━━━━━━━━━━━━━ —ತಕ್ಷಶಿಲಾ ತರುವಾಯ ಪ್ರಖ್ಯಾತಿಗೆ ಬಂದ ನಾಲಂದಾ ವಿಶ್ವ...

Current post